ಚಿಕನ್ ಕರ್ರಿ

 ಬೇಕಾಗುವ ಸಾಮಗ್ರಿಗಳು 

  1. ಚಿಕನ್ 
  2. ಟೊಮೋಟೊ 
  3. ಈರುಳ್ಳಿ
  4. ಶುಂಠಿ ಬೆಳ್ಳುಳ್ಳಿ ಪೇಸ್ಟ್ 
  5. ಎಣ್ಣೆ 
  6. ಅರಿಶಿನ ಪುಡಿ 
  7. ಒಣಮೆಣಸಿನ ಪುಡಿ 
  8. ಧನಿಯ ಪುಡಿ 
  9. ಕಾಳುಮೆಣಸಿನ ಪುಡಿ 
  10. ಗರಂ ಮಸಾಲ 
  11. ಉಪ್ಪು

ಮಾಡುವ ವಿಧಾನ 

ಈರುಳ್ಳಿ ಮತ್ತು ಟೊಮೋಟೊವನ್ನು ಬೇರೆ ಬೇರೆಯಾಗಿ ಮೊದಲು ಮಾಡಿಕೊಳ್ಳಿ ಒಂದು ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಪೇಸ್ಟ್ ಹಾಕಿ ಉರಿದು ಕೋಳಿ ತುಂಡುಗಳನ್ನು ಹಾಕಿ ಫ್ರೈ ಮಾಡಿ . ನಂತರ ಅರಿಶಿನ ಮತ್ತು ಉಪ್ಪು ಸೇರಿಸಿ ಬೇಯಲು ಬಿಡಿ ಅರ್ಧ ಬೆಂದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೂಗೋವರೆಗೂ ಉರಿಯಿರಿ ನಂತರ ಒಣಮೆಣಸಿನ ಪುಡಿ, ಧನಿಯ ಪುಡಿ, ಗರಂ ಮಸಾಲ ಪುಡಿ ಮತ್ತು ಕಾಲು ಮೆಣಸಿನ ಪುಡಿ  ಸೇರಿಸಿ ಕೈ ಆಡಿಸಿ ಸ್ವಲ್ಪ ನೀರು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ಚಿಕನ್ ಕರ್ರಿ ರೆಡೀ.  
   ಇದು ಅನ್ನ,ಚಪಾತಿ, ದೋಸೆ, ಯಾವುದಾದರೂ ಸರಿ ಜೊತೆಯಾಗುತ್ತದೆ 

Comments